Sunday 30 October 2011

ವಚನ ಸಿಂಚನ ೯:ಎನ್ನ ಕರ ಸ್ಥಳಕ್ಕೆ ಬಾರಯ್ಯಾ


ಜಗದಗಲ ಮುಗಿಲಗಲ  ಮಿಗೆಯಗಲ  ನಿಮ್ಮಗಲ 
ಪಾತಾಳದಿಂದತ್ತತ್ತ  ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೇ 
ಕೂಡಲ ಸಂಗಮ ದೇವಯ್ಯ
ಎನ್ನ ಕರ ಸ್ಥಳಕ್ಕೆ ಬಂದು ಚುಳುಕಾದಿರಯ್ಯ
                                   -ಬಸವಣ್ಣ
 
ಶಿವನು ಇಡೀ ವಿಶ್ವವನ್ನೇ ಆವರಿಸಿದ್ದಾನೆ..ಅವನಿಗೆ ಆದಿ ಅಂತ್ಯವಿಲ್ಲ...ಆತ  ವಿಶ್ವರೂಪಿ..ಇಡೀ ಭೂ ಮಂಡಲವನ್ನೇ ಆವರಿಸಿದ್ದಾನೆ...ಶಿವನ ಪಾದಗಳು ಪಾತಾಳದಿಂದ ಆಚೆಗೆ ಇದೆ..ಹಾಗೆ ಆತನ ಶಿರಸ್ಸು,ಮುಕುಟ ಬ್ರಹ್ಮಾಂಡದ ಆಚೆಗೆ ಇದೆ...ಯಾರ ಗಮನಕ್ಕೂ ಬಾರದೆ,ಯಾರ ಕಣ್ಣಿಗೂ ಗೋಚರಿಸದೆ ಇರುವ ಅಪ್ರತಿಮವಾದ ಸ್ವರ್ರೋಪ ಎಂದು ಶಿವನನ್ನು ಹಾಡಿ ಹೊಗಳುವ ಬಸವಣ್ಣ ಈ ವಚನದಲ್ಲಿ ವಿಶ್ವರೂಪಿಯಾದ ಕೂಡಲಸಂಗಮದೇವನು ಇಷ್ಟಲಿಂಗದ ರೂಪದಲ್ಲಿ ತನ್ನ ಅಂಗೈ ಮೇಲೆ ಬಂದು ಇಡೀ ವಿಶ್ವದ ದರ್ಶನವನ್ನು ನೀಡಿದ್ದಕ್ಕೆ ಧನ್ಯಾತ ಭಾವದಿಂದ ಕೂಡಲಸಂಗಮನನ್ನು ನೆನೆಯುತ್ತಾರೆ..

ಇಷ್ಟಲಿಂಗದ ಆಕಾರ ವಿಶ್ವದ ರೂಪದಲ್ಲಿ ಇದೆ ಮತ್ತು ಇಷ್ಟಲಿಂಗವು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸ್ತ್ರೀ ಮತ್ತು ಪುರುಷ ಸಮಾನತೆಯನ್ನು ಮನದಲ್ಲಿ ತುಂಬುವ ಅರಿವಿನ ಬೆಳಕಾಗಿದೆ.. ಇಷ್ಟಲಿಂಗವು ಸಮಗ್ರ ಕ್ರಾಂತಿಯ ಮಾರ್ಗದರ್ಶಿ. ಸರ್ವರನ್ನು, ಅವರೊಳಗಿನ ಪರಮಾತ್ಮನೊಡನೆ ಒಂದುಗೂಡಿಸುವ ಸಾಧನ.
 
 


2 comments:

  1. ಗಿರೀಶ್ ಅವರೆ,ನಿಮ್ಮ ವಚನ ಸಿಂಚನವು ಚೆನ್ನಾಗಿದೆ. ನಿಮ್ಮ ಅನಿಸಿಕೆಯು ಚೆನ್ನಾಗಿ ಮೂಡಿದೆ. ಬರೆಯುತ್ತಿರಿ.

    ReplyDelete
  2. ಲೀಲಾ ಗರಡಿ ಅವರೇ....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete