ಮಂಡೆ ಮಾಸಿದಡೆ ಮಹಾ ಮಜ್ಜನವ ಮಾಡುವುದು,
ವಸ್ತ್ರ ಮಸಿಡದೆ ಮಡಿವಾಳರಿಗಿಕ್ಕುವುದು,
ಮನದ ಮೈಲಿಗೆ ತೊಳೆಯಬೇಕಾದರೆ
ಕೂಡಲ ಚೆನ್ನ ಸಂಗಯ್ಯನ ಶರಣ ಅನುಭಾವವ ಮಾಡುವುದು...
-ಚೆನ್ನ ಬಸವಣ್ಣ
ಇಲ್ಲಿ ಚೆನ್ನ ಬಸವಣ್ಣನವರು ಮನಸ್ಸಿನ ಚಂಚಲತೆ,ಆಲೋಚನೆಗಳು ಮತ್ತು ನಿಯಂತ್ರಣದ ಬಗ್ಗೆ ಹೇಳುತ್ತಾರೆ ...
ತಲೆ ಮಾಸಿದರೆ ಸ್ನಾನ ಮಾಡಿದರೆ ಧೂಳು ಎಲ್ಲಾ ಹೋಗಿ ಮತ್ತೆ ಶುಚಿ ಆಗುತ್ತದೆ..ಅದೇ ರೀತಿ ಬಟ್ಟೆ ಮಾಸಿದರೆ ಮಡಿವಾಳ ರಿಗೆ ಕೊಟ್ಟರೆ ಅವರು ಚೆನ್ನಾಗಿ ತೊಳೆದು ಕೊಡುತ್ತಾರೆ...ಆದರೆ
ನಮ ಮನಸ್ಸಿನಲ್ಲಿರುವ ಕೊಳೆಯನ್ನು ಅಂದರೆ ಚಂಚಲವಾದ ನಮ್ಮ ಮನಸ್ಸಿನ ಕೆಟ್ಟ ಆಲೋಚನೆಗಳು,ತೊಳೆಯಬೇಕಾದರೆ ನಾವು ಕೂಡಲ ಚೆನ್ನಸಂಗಯ್ಯನ ಶರಣ ಸಂಗವ ಮಾಡಬೇಕು.. ಅಂದರೆ ಶರಣರು ಅಷ್ಟು ಸಾತ್ವಿಕರು,ಪರಿಶುದ್ದರು ಎಂದು ಚೆನ್ನ ಬಸವಣ್ಣನವರು ಅಭಿಪ್ರಾಯಪಡುತ್ತಾರೆ...ಶರಣರು ತಮ್ಮ ಕಾಯಕದಿಂದ ಮತ್ತು ಅವರ ಸಾಧನೆಗಳಿಂದ ಅನುಭಾವವನ್ನು ಪಡೆದಿರುವ ಜ್ಞಾನಿಗಳು ಎಂದು ತಿಳಿಯಬಹುದು...
No comments:
Post a Comment