ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು
ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು
ದೇವಭಕ್ತರಿಲ್ಲದೂರುಸಿನೆ, ಹಾಳು ಕೂಡಲ ಸಂಗಮದೇವಾ.
-ಬಸವಣ್ಣ
ಇಲ್ಲಿ ಬಸವಣ್ಣನವರು ಮನುಷ್ಯನ ನಡತೆ ಮತ್ತು ಅವನ ಕಾರ್ಯಗಳ ಬಗ್ಗೆ ಹೇಳುತ್ತಾರೆ... ಹಣೆಯಲ್ಲಿ ವಿಭೂತಿ ಇಲ್ಲದವರ ಮುಖದಲ್ಲಿ ಶಿವ ಕಳೆ ಇರುವುದಿಲ್ಲ ,ಅಂಥವರ ಮುಖ ನೋಡಲು ಆಗುವುದಿಲ್ಲ... "ಕೂಡಲ ಸಂಗನ ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ " ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..
ಅದೇ ರೀತಿ ಲಿಂಗ ದೇವರಿಲ್ಲದ ,ಲಿಂಗ ದೇವರನ್ನು ಪೂಜಿಸದ ಉರು ಅಥವಾ ಅಂತ ಜಾಗಕ್ಕೆ ಹೋಗಲು ಮನಸ್ಸು ಒಪ್ಪುವುದಿಲ್ಲ ಎಂದು ಹೇಳುತ್ತಾ ದೇವ ಭಕ್ತರಿಲ್ಲದ ಉರು ಮತ್ತು ಆ ಸೀಮೆ ಹಾಳು ಬೀಳುತ್ತದೆ...ದೇವ ಭಕ್ತರಿಲ್ಲದಿದ್ದರೆ ಅಲ್ಲಿ ಸಂಸ್ಕಾರ ಆಗಲಿ ಸನ್ನಡತೆ ಯಾಗಲಿ ಇರುವುದಿಲ್ಲ ಎಂದು ಭಾವಿಸುತ್ತಾರೆ..
No comments:
Post a Comment