Sunday, 18 December 2011

ವಚನ ಸಿಂಚನ ೧೬ :ಶೃಂಗಾರ

ನೀರಿಂಗೆ ನೈದಿಲೆ ಶೃಂಗಾರ,
ಸಮುದ್ರಕ್ಕೆ ತೆರೆಯ ಶೃಂಗಾರ,
ನಾರಿಗೆ ಗುಣವೇ ಶೃಂಗಾರ,
ಗಗನಕ್ಕೆ ಚಂದ್ರಮನೆ ಶೃಂಗಾರ,
ನಮ್ಮ ಲಿಂಗದೇವನ ಶರಣರ ನೊಸಲಿಗೆ ಶ್ರೀ ವಿಭೂತಿಯೇ ಶೃಂಗಾರ
                                                     -ಬಸವಣ್ಣ

ಇಲ್ಲಿ ಬಸವಣ್ಣನವರು ಅವಶ್ಯಕತೆ,ನೈಜತೆ  ಮತ್ತು ಪ್ರಕೃತಿಯ ನಿಯಮಗಳಲ್ಲಿ ಶೃಂಗಾರವನ್ನು ಬಣ್ಣಿಸುತ್ತಾರೆ....
ನೀರಿನಲ್ಲಿ ಕೆಂದಾವರೆ ಇದ್ದರೆ ಒಂದು ಸೊಬಗು.... ಸಮುದ್ರದಲ್ಲಿ ತೆರೆ ಯಾವಾಗಲು ಏಳುತ್ತಿರುತ್ತದೆ...ತೆರೆ ನಿಂತರೆ ಸಮುದ್ರಕ್ಕೆ ಕಲೆಯೇ ಇರುವುದಿಲ್ಲ... ಹಾಗೆ ಒಂದು ಹೆಣ್ಣು ಅವಳು ನೋಡಲು ಎಷ್ಟೇ ಚೆನ್ನಾಗಿದ್ದರೂ ಅವಳಲ್ಲಿ ಒಳ್ಳೆಯ ಗುಣ ,ಸಂಸ್ಕೃತಿ ಇಲ್ಲದಿದ್ದರೆ ಅದು ಶೋಭೆ ತರುವುದಿಲ್ಲ...ಅದೇ ರೀತಿ ಆಕಾಶದಲ್ಲಿ ಚಂದ್ರ ಮಿನುಗುತ್ತಿದ್ದರೆ ನೋಡಲು ಚೆನ್ನ...ಹುಣ್ಣಿಮೆಯಲ್ಲಿ ಗಗನವು ಸೊಗಸಾಗಿರುತ್ತದೆ..ಅದೇ ಅಮವಾಸ್ಯೆಯಲ್ಲಿ ಕಟ್ಟಲು ಕವಿದಿರುತ್ತದೆ... ಇದೆ ರೀತಿ ಕೂಡಲ ಸಂಗನ  ಶರಣರ ಹಣೆಯಲ್ಲಿ ವಿಭೂತಿ ಕಂಗೊಳಿಸುತ್ತಿದ್ದರೆ ಅದರಲ್ಲಿ ಶಿವ ಕಳೆಯನ್ನು ಕಾಣಬಹುದು ಎಂದು ಅಭಿಪ್ರಾಯಪಡುತ್ತಾರೆ.. ಅಡ್ಡ ವಿಭೂತಿ ಇಲ್ಲದವರ ಮುಖ ನೋಡಲಾಗದು ಎಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ..

1 comment:

  1. ಅಂಕಿತನಾಮ ವೇ ಗೊತ್ತಿರದ ಇರುವ ನಿಮ್ಮ ಅಜ್ಞಾನಕ್ಕೆ ಮರುಕ ಪಡಬೇಕಾಗುತ್ತದೆ. ಇತ್ತೀಚೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಶಾಸನವೊಂದು ದೊರಕ್ಕಿದ್ದು ಅದರಲ್ಲಿ ಸ್ಪಷ್ಟ ಕೂಡಲಸಂಗಮದೇವ ಅಂಕಿತವಿದೆ. ಕಲ್ಪಿತ ಕುಚೇಷ್ಟೇ ಯ ಲಿಂಗದೇವನಿಲ್ಲ

    ReplyDelete