ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ,
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳದಂತೆ
ಇರಿಸು ಕೂಡಲಸಂಗಮದೇವಾ !!!
-ಬಸವಣ್ಣ
ಇಲ್ಲಿ ಬಸವಣ್ಣನವರು ಮನೋನಿಗ್ರಹದ ಬಗ್ಗೆ ಹೇಳುತ್ತಾ ತಮ್ಮನ್ನು ಕೇವಲ ಸತ್ಯದೆಡೆಗೆ,ವಿಚಾರವಂತಿಕೆ ಎಡೆಗೆ,ನ್ಯಾಯ ನೀತಿಯ ಧರ್ಮದೆಡೆಗೆ ಮಾತ್ರ ಸೆಳೆಯುವಂತೆ ಮಾಡು ಎಂದು ಕೂಡಲಸಂಗಮದೇವನಲ್ಲಿ ಪ್ರಾರ್ಥಿಸುತ್ತ ಎಲ್ಲೂ ಹೋಗದಂತೆ ತನ್ನನ್ನು ಕಾಲಿಲ್ಲದವನನ್ನಾಗಿ ಮಾಡು,ಜಗದ ಅಂಧಕಾರವನ್ನು ನೋಡದಂತೆ ಕುರುಡನನ್ನಾಗಿ ಮಾಡು,ಅಜ್ಞಾನದ ಮಾತನ್ನು ಕೇಳದಂತೆ ಕಿವುಡನನ್ನಾಗಿ ಮಾಡು ಎಂದು ಕೇಳಿಕೊಳ್ಳುತ್ತಾರೆ.ಇಲ್ಲಿ ಅನ್ಯ ವಿಷಯ ಅಂದರೆ ಅಜ್ಞಾನ ಮತ್ತು ಅಸಭ್ಯ ಚಿಂತನೆಗಳು ಎಂದೂ ಮತ್ತು ಶರಣರ ಪಾದ ಅಂದರೆ ಭಕ್ತಿ ಜ್ಞಾನ ಮತ್ತು ಅರಿವಿನ ಸಂಕೇತ ಎಂದು ಭಾವಿಸಬಹುದು.

ಥ್ಯಾಂಕ್ಸ್ ಸರ್ ನಿಮ್ಮ ವಚನ ಭಾವಾರ್ಥ ಸಂಗ್ರಹ ಓಡಿದೆನು ಸರಳ ಭಾಷೆ ಯಲ್ಲಿ ವಿಷಯ ತಿಳಿಯಿತು .
ReplyDeleteಥ್ಯಾಂಕ್ಸ್