Monday 13 February 2012

ವಚನ ಸಿಂಚನ ೨೪ : ಜ್ಞಾನಯೋಗಿ

ಅರವತ್ತೆಂಟು ಸಾವಿರ ವಚನಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯಾ
ಹಾಡುವುದೊಂದೇ  ವಚನ ;ನೋಡುವುದೊಂದೇ ವಚನ
ವಿಷಯ ಬಿಟ್ಟು ನಿರ್ವಿಶಯನಾಗುವುದೊಂದೇ ವಚನ
ಕಪಿಲ ಸಿದ್ಧ ಮೆಲ್ಲೆಶ್ವರನಲ್ಲಿ !!!
                                   -ಸಿದ್ಧರಾಮೇಶ್ವರ,

 ಈ ವಚನದ ಮೂಲಕ ತಿಳಿಯುವುದೇನೆಂದರೆ ಸಿದ್ಧರಾಮಣ್ಣ ಅರವತ್ತೆಂಟು ಸಾವಿರ ವಚನಗಳನ್ನು ಬರೆದಿದ್ದರು ಎಂದು,ಆದರೆ ಇದುವರಗೆ ಸಿಕ್ಕಿರುವ ಸಿದ್ಧರಾಮನ ವಚನಗಳ ಸಂಖ್ಯೆ ೧೯೯೨.ಅಷ್ಟೊಂದು ಬರೆದಿದ್ದರು ಇರಬಹುದು..ಅಲ್ಲದೆ ಆತ ತನ್ನ ಜೀವಿತಾವಧಿಯಲ್ಲಿ ಮಾಡಿದ ಕಾರ್ಯಗಳನ್ನು ಗಮನಿಸಿದರೆ ಅಷ್ಟು ವಚನಗಳನ್ನು ಬರೆದಿದ್ದ ಎಂಬುದರಲ್ಲಿ ಸಂದೇಹವಿಲ್ಲ.. ಆತನನ್ನು ಯೋಗಿಗಳಲ್ಲಿ ಮಹಾಯೋಗಿ ಅನ್ನುತ್ತಾರೆ ಬಸವಣ್ಣನವರು... ಕೆರೆ ಕಟ್ಟೆಗಳನ್ನು ಕಟ್ಟಿಸಿದ,ಕಾಯಕ ವರ್ಗದ ಏಳಿಗೆಗೆ ಶ್ರಮಿಸಿದ,ಆದ್ದರಿಂದಲೇ ಈತನನ್ನು ಕಾಯಕ ಯೋಗಿ ಅನ್ನುತ್ತಾರೆ..ಸಿದ್ಧರಾಮ ಸಮಾಜ ಮುಖಿಯಾಗಿ ಚಿಂತಿಸಿದ ವಿಚಾರಗಳನ್ನು ಗಮನಿಸಿದಾಗ ಆತನ ಪ್ರಭುತ್ವ ಮತ್ತು ಆತ ವಚನಗಳನ್ನು ಅನುಭವಿಸಿ ಬರೆದಿದ್ದ ಎಂದು ಹೇಳಬಹುದು. ಅಲ್ಲದೆ ೧೨ನೆ ಶತಮಾನದ ಅನುಭವ ಮಂಟಪದಲ್ಲಿ ಕಾರ್ಯೋನ್ಮುಖರಾಗಿ ಅಲ್ಲಮ ಪ್ರಭು ಮತ್ತು ಬಸವಣ್ಣನವರ ಜೊತೆ ಸೇರಿ ಶ್ರಮ ವಹಿಸುತ್ತಾರೆ..ಅಲ್ಲದೆ ಮಹಿಳೆಯರ ಸಮಾನತೆಗೆ ಹೋರಾಡಿದ ಹಲವು ವಚನಕಾರರು ಮತ್ತು ಶರಣರ ಸಾಲಿನಲ್ಲಿ ಸಿದ್ಧರಾಮ ಕೂಡ ನಿಲ್ಲುತ್ತಾರೆ.. ಹೆಣ್ಣನ್ನು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ಎಂದು ಬಣ್ಣಿಸಿ ಹೆಣ್ಣನ್ನು ಸಾಕ್ಷಾತ್ ದೇವರಿಗೆ ಹೋಲಿಸಿದ ಮೊದಲ ವಚನಕಾರ ಇರಬಹುದು...
ವಚನದ ಕೊನೆಯಲ್ಲಿ ಹಾಡುವುದೊಂದೇ  ವಚನ ;ನೋಡುವುದೊಂದೇ ವಚನ ಅಂದರೆ ನಡೆದಂತೆ ನುಡಿ,ನುಡಿದಂತೆ ನಡಿ ಎಂಬ ಅರ್ಥವನ್ನು ನೀಡುತ್ತದೆ.. ಹಾಗೆ ನಡೆಯದಿದ್ದರೆ ವಿಷಯ ಬಿಟ್ಟು ನಿರ್ವಿಶಯನಾಗಿ ಕಪಿಲ ಸಿದ್ಧ ಮಲ್ಲೇಶ್ವರನಲ್ಲಿ ಲೀನವಾಗಿ ಎಂದು ಹೇಳುತ್ತಾರೆ..

3 comments:

  1. ಗಿರೀಶ್
    ವಚನಗಳಿಗಾಗೇ ಒಂದು ಬ್ಲಾಗ್ ಮಾಡಿದ್ದು ನೋಡಿರಲಿಲ್ಲ... ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೂ ವಚನಗಳೆಂದರೆ ಇಷ್ಟವೆನಿಸುತ್ತೆ.. ನಾನಗಂತೂ ತುಂಬಾ ಇಷ್ಟ ಹಾಡುಗಾರಿಕೆ ಚೆನ್ನಾಗಿ ಬರುವುದಾಗಿದ್ದರೆ ಎಲ್ಲಾ ವಚನಗಳನ್ನ ರಾಗವಾಗಿ ಹಾಡಲು ಪ್ರಯತ್ನಿಸುತ್ತಿದ್ದೆನೇನೋ...
    ಸಿದ್ದರಾಮರ ಬಗ್ಗೆ ಜಿ.ಎಸ್.ಶಿವರುದ್ರಪ್ಪನವರು ತುಂಬಾ ಚೆನ್ನಾಗಿ ಬರೆದಿದ್ದಾರೆ ಆ ಪುಸ್ತಕವನ್ನು ಒಮ್ಮೆ ಓದಿ... ಸಿದ್ದರಾಮ ವಚನಗಳು ಇಷ್ಟೊಂದು ಇದ್ದವೇ ಎಂದು ಗೊತ್ತೇ ಇರಲಿಲ್ಲ.
    ಧನ್ಯವಾದಗಳು ಮತ್ತಷ್ಟು ವಚನ ಕಾರ್ಯಗಳು ಸಾಗಲಿ..
    ಶುಭವಾಗಲಿ

    ReplyDelete
  2. [Suguna Madam]ತುಂಬಾ ತುಂಬಾ ಧನ್ಯವಾದಗಳು ...ಮೊದಲಿನಿಂದಲೂ ವಚನ ಸಾಹಿತ್ಯ ಅಂದರೆ ಸ್ವಲ್ಪ ಇಷ್ಟ... ಆಗಾಗಿ ಯಾವಾಗಲೂ ವಚನಗಳನ್ನು ಓದುತ್ತಿರುತ್ತೇನೆ...ನನಗೆ ಅರ್ಥ ಆದ ಮಟ್ಟಿಗೆ ಮತ್ತು ನಾನು ಅರ್ಥೈಸಿಕೊಂಡ ರೀತಿಯಲ್ಲಿ ಇಲ್ಲಿ ವಚನಗಳ ಅರ್ಥವನ್ನು ಬರೆಯುತ್ತಿದ್ದೇನೆ... ಒಂದು ಸಣ್ಣ ಪ್ರಯತ್ನ ಅಷ್ಟೇ...
    ಸಿದ್ದರಾಮೇಶ್ವರರ ಬಗ್ಗೆ ಜಿ.ಎಸ್.ಎಸ್ ಅವರು ಬರೆದಿದ್ದಾರೆ ಎಂಬುದು ಗೊತ್ತಿರಲಿಲ್ಲ.. ಖಂಡಿತ ಆ ಪುಸ್ತಕವನ್ನು ಹುಡುಕಿ ಓದುತ್ತೇನೆ..ನನ್ನ ಬಳಿ ಸಿದ್ದರಾಮರ ಸುಮಾರು ೨೫೦-೩೦೦ ವಚನಗಳು ಇರುವ ಪುಸ್ತಕಗಳು ಇವೆ...
    ಹಾಗೆ ಕರ್ನಾಟಕ ಸರ್ಕಾರ ಸಿದ್ಧ ಪಡಿಸಿರುವ ವಚನ ಸಂಪುಟದಲ್ಲಿ ಬಹುತೇಕ ಎಲ್ಲಾ ಶರಣರ ವಚನಗಳು ಸಿಗುತ್ತವೆ ಅಂತೆ... ೧೪ ಸಂಪುಟಗಳಿವೆ ಅದರಲ್ಲಿ.. ಅದನ್ನು ಸಂಗ್ರಹಿಸಬೇಕು ಅಂದು ಕೊಂಡಿದ್ದೇನೆ...
    ಸುಮ್ಮನೆ ವಚನಗಳನ್ನು ಗುನುಗುತ್ತಿರಿ...ಆಗ ತನ್ನಿಂದ ತಾನೇ ರಾಗ ಬರಬಹುದು...ನನದೂ ರಾಗ ಚೆನ್ನಾಗಿಲ್ಲ .. ಆದರೂ ಸುಮ್ಮನೆ ಗುನುಗುತ್ತಿರುತ್ತೇನೆ...

    ReplyDelete