ದೇವನೊಬ್ಬ ನಾಮ ಹಲವು ;
ಪರಮ ಪತಿವ್ರತೆಗೆ ಗಂಡನೊಬ್ಬ ;
ಮತ್ತೊಂದಕ್ಕೆರಗಿದಡೆ ಕಿಮಿಮೂಗ ಕೊಯ್ವನು !
ಹಲವು ದೈವನ ಎಂಜಲು ತಿಂಬುವರನೇನೆ೦ಬೆ
ಕೂಡಲಸಂಗಮದೇವಾ !!!
-ಬಸವಣ್ಣ
ಇಲ್ಲಿ ಬಸವಣ್ಣನವರು ಇಡೀ ಭೂ ಮಂಡಲಕ್ಕೆ ಒಬ್ಬನೇ ದೈವ,ಪ್ರತಿ ಜೀವ ಜಂತುಗಳ ನಡವಳಿಕೆಗೆ ಅವನೇ ಕಾರಣಕರ್ತ..ಅದೇ ರೀತಿ ಪತಿವ್ರತೆ ಆದ ಹೆಣ್ಣಿಗೆ ಒಬ್ಬನೇ ಗಂಡ.ಅವಳು ಇನ್ನೊಂದು ಗಂಡನ ಸಂಗವನ್ನು ಬಯಸುವುದಿಲ್ಲ."ಛಲ ಬೇಕು ಶರಣಂಗೆ ಪರಸತಿಯನೊಲ್ಲೆನೆಂಬ" ಎಂದು ಗಂಡಸಿಗೆ ಹೇಳಿದರೆ,ಈ ವಚನದಲ್ಲಿ "ಪರಮ ಪತಿವ್ರತೆಗೆ ಗಂಡನೊಬ್ಬ " ಎಂದು ಹೆಣ್ಣಿಗೆ ಹೇಳುತ್ತಾರೆ.. ಸತಿ ಪತಿಗಳಲ್ಲೊಂದಾದ ಭಕ್ತಿ ಎಂದು ಇನ್ನೊಂದು ವಚನದಲ್ಲಿ ಹೇಳಿದ ಹಾಗೆ.ಈ ವಚನದಲ್ಲಿ ಹೇಳುವ ಹಾಗೆ ಜಗತ್ತಿಗೆ ಒಬ್ಬನೇ ದೇವರು,ಅದೇ ರೀತಿ ಹೆಣ್ಣಿಗೆ ಒಬ್ಬನೇ ಗಂಡ,ಅವನು ಕೂಡ ಆಕೆಗೆ ದೈವದ ಸಮಾನ.
ಮತ್ತೊಂದಕ್ಕೆರಗಿದಡೆ ಅಂದರೆ ಇಲ್ಲಿ ಪ್ರತಿಯೊಬ್ಬ ಮನುಷ್ಯನು ಬೇರೆ ದೇವರನ್ನು ಪೂಜಿಸುವುದು ಆಗಿರಬಹುದು ಅಥವಾ ಹೆಣ್ಣೊಬ್ಬಳು ಬೇರೆ ಗಂಡನನ್ನು ಬಯಸುವುದು ಆಗಿರಬಹುದು ,ಅಂಥವರ ಕಿವಿ ಮೂಗು ಕೊಯ್ವೆನು ಅಂದರೆ ಅವರು ಶಿಕ್ಷಿಸಲ್ಪಡುತ್ತಾರೆ ಎಂದು ಭಾವಿಸಬಹುದು.ಸಾಕ್ಷಾತ್ ದೈವನೊಬ್ಬ ಇರಬೇಕಾದರೆ ಬೇರೆ ಬೇರೆ ದೇವರುಗಳ ಎಂಜಲು ತಿನ್ನುವವರಿಗೆ ಏನೆಂದು ಹೇಳಬೇಕು ಎಂದು ಬಸವಣ್ಣನವರು ಕೂಡಲಸಂಗಮ ದೇವನಲ್ಲಿ ಕೇಳಿಕೊಳ್ಳುತ್ತಾರೆ..
ಇದೆ ರೀತಿ ಜೇಡರ ದಾಸಿಮಯ್ಯ ಒಂದು ವಚನದಲ್ಲಿ ಕೇಳುತ್ತಾರೆ"ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳ ನೇನೆoಬೆ ರಾಮನಾಥ !!" ಎಂದು.
No comments:
Post a Comment