ಓಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿಯುರಿದೊಡೆ ನಿಲಬಾರದು.
ಧರೆ ಹತ್ತಿಯುರಿದೊಡೆ ನಿಲಬಾರದು.
ಏರಿ ನೀರುಣ್ಬೋಡೆ, ಬೇಲಿ ಕೆಯ್ಯ ಮೇವೊಡೆ ,
ನಾರಿ ತನ್ನ ಮನೆಯಲ್ಲಿ ಕಳುವೊಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ?
--ಬಸವಣ್ಣ
ಇಲ್ಲಿ ಬಸವಣ್ಣನವರು ನಾಯಕತ್ವದ ಬಗ್ಗೆ ವಿಚಾರ ಮಾಡುತ್ತಾರೆ.ಕೆಲವು ಉದಾಹರಣೆಗಳನ್ನೂ ಕೊಡುತ್ತ ಇಲ್ಲಿ ನಾಯಕ ಮತ್ತು ಅವನ ಗುಣಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಾರೆ.
ಒಂದು ಓಲೆ ಉರಿಯುತ್ತಿದ್ದರೆ ಅದರ ಮುಂದೆ ನಿಲ್ಲ ಬಹುದು ಅಥವಾ ಅದನ್ನು ನಿಂದಿಸಬಹುದು.ಅದೇ,ಇಡಿ ಜೀವ ರಾಷಿಗಳೇ ಅವಲಂಬಿಸಿರುವ ,ಸಕಲ ಜೀವಗಳ ನೆಲೆಗೆ ಸಾಕ್ಷಿ ಆಗಿರುವ ಭೂಮಿಯೇ ಉರಿಯುತ್ತಿದ್ದರೆ ಏನು ಮಾಡಲ ಆಗದು ಅಲ್ಲವೇ?
ಇದೆ ರೀತಿ ಕೆರೆಗೆ ಏರಿಯನ್ನು ನೆರು ಸಂಗ್ರಹಿಸಲು ಅಥವಾ ನೀರನ್ನು ತಡೆಯಲು ಕಟ್ಟಿರುತ್ತಾರೆ,ಆ ಏರಿಯೇ ನೀರನ್ನು ಕುಡಿದರೆ ಅನಾಹುತವಲ್ಲವೇ?
ಅದೇ ರೀತಿ ಹೊಲದಲ್ಲಿ ಬೇಲಿಯನ್ನು ಸಂರಕ್ಷಿಸಲು ಹಾಕಿರುತ್ತಾರೆ,ಆ ಬೇಲಿಯೇ ಎದ್ದು ಹೊಲದ ತುಂಬಿ ಬೆಳೆದರೆ ಬೇರೆ ಬೆಳೆಯನ್ನು ಬೆಳೆಯಲು ಅಸಾಧ್ಯ...ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಆಗುವುದಿಲ್ಲ...
ಹಾಗೆ ಒಂದು ಸಂಸಾರದಲ್ಲಿ ಮನೆಯ ಯಜಮಾನಿ ಅನ್ನಿಸಿಕೊಂಡ ಮತ್ತು ಸಂಸಾರ ನಿಭಾಯಿಸಬೇಕಾದ ಒಂದು ಹೆಣ್ಣು ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಆ ಮನೆ ಇನ್ನೆಷ್ಟರ ಮಟ್ಟಿಗೆ ಸುಧಾರಿಸುತ್ತದೆ ಅಲ್ಲವೇ?
ಈ ರೀತಿ ನಾಯಕ ಎನ್ನಿಸಿ ಕೊಂಡವರೆ ತಪ್ಪು ಮಾಡಿದರೆ ನಾನು ಇನ್ನು ಯಾರಿಗೆ ದೂರಲಿ ಎಂದು ಕೂಡಲ ಸಂಗಮ ದೇವನಲ್ಲಿ ಕೇಳಿಕೊಳ್ಳುತ್ತಾರೆ...

No comments:
Post a Comment