Monday 10 December 2012

ವಚನ-ಸಿಂಚನ ೫೭:ಪುಣ್ಯ ಪಾಪಗಳ ಎಂಜಲು

ವೇದಂಗಳೆಲ್ಲ ಬ್ರಹ್ಮನೆಂಜಲು ,ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಗಳೆಲ್ಲ ರುದ್ರನೆಂಜಲು,ಪುರಾಣಂಗಳೆಲ್ಲ ವಿಷ್ಣುವಿನೆಂಜಲು ,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು ,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ  ಹೇಳುವರು ಕೇಳುವರು 
ಪುಣ್ಯ ಪಾಪಂಗಳ ಎಂಜಲೆಂದಾತ ಅಂಬಿಗರ ಚೌಡಯ್ಯ..
                                       -ಅಂಬಿಗರ ಚೌಡಯ್ಯ
                             

 ಈ ವಚನದಲ್ಲಿ ಅಂಬಿಗರ ಚೌಡಯ್ಯ ವೇದ. ಶಾಸ್ತ್ರ ಆಗಮ ಪುರಾಣ  ನಾದಬಿಂದು  ಅಕ್ಷರ  ತ್ರಯ ಇವುಗಳನ್ನೆಲ್ಲ  ಹೇಳುವವರು  ಮತ್ತು ಕೇಳುವವರು ಪಾಪ ಪುಣ್ಯಗಳ ಎಂಜಲು ಎಂದು ಛೇಡಿಸುತ್ತಾರೆ. ಹೀಗೆ  ಹೇಳುವ ಮೂಲಕ  ದೇಹವೇ ದೇವಾಲಯ  ಎಂದು  ಅಂತರಾತ್ಮದ ಪ್ರತಿರೂಪವೇ ,ಕುರುಹು ಆದ ಇಷ್ಟಲಿಂಗವೆಂದು  ಹೇಳುತ್ತಾರೆ.. ರೀತಿ ಇಷ್ಟಲಿಂಗದ ಪೂಜೆಯ   ಮಹತ್ವವನ್ನು ಇಲ್ಲಿ ವಿವರಿಸುತ್ತಾರೆ.ಅಸ್ಪ್ರುಶ್ಯರು ಮತ್ತು ಕೀಳು ಜಾತಿಯವರು ಎಂದು ಭಾವಿಸಲ್ಪಟ್ಟವರನ್ನು  ದೇವಾಲಯಕ್ಕೆ ಪ್ರವೇಶ ನಿಷಿದ್ಧ ಇದ್ದ ಸನ್ನಿವೇಶದಲ್ಲಿ ಅಂಥವರಿಗೆ ದೇಹವನ್ನೇ  ಅವರ  ಅಂತರಂಗದಲ್ಲಿ ದೇವಸ್ವರೂಪವನ್ನು ಕಂಡುಕೊಳ್ಳುವ ಮತ್ತು ಅದರ ಕುರುಹು ಆಗಿ ಇಷ್ಟಲಿಂಗದ ಮೂಲಕ ತಮ್ಮ ಅಂಗೈ ಯಲ್ಲಿ ದೇವರನ್ನು ಕಂಡುಕೊಂಡು ತಾವು  ಹೋಗದೆ ದೇವರನ್ನೇ ತಮ್ಮತ್ತ  ಕರೆಸಿ ಕೊಂಡವರು  ಎಂದು ಹೇಳುತ್ತಾರೆ.ಈ ವಚನದಲ್ಲಿ ಚೌಡಯ್ಯ ಕೂಡ ಹೊರಗಿನವರ ಹಾಗೆ ಕಂಡು ಬಂದು ಹೊರಗಿನವರಿಗೆ  ನಿಂತು ಅವರ ಅಭಿವ್ಯಕ್ತಿಯನ್ನು ಕೊಂಡಾಡುತ್ತಾರೆ .

2 comments:

  1. ಅಂಬಿಗರ ಚೌಡಯ್ಯನವರ ವಚನಗಳ ಸಂಕಲನವೊಂದು ನನ್ನ ಹತ್ತಿರವಿರಬೇಕು. ಈ ಬರಹದಿಂದ ನನ್ನನ್ನು ಅಟ್ಟ ಹುಡುಕುವಂತೆ ಪ್ರೇರೇಪಿಸಿದ್ದು ನಿಮ್ಮ ಗಿರಿಮೆ.

    ReplyDelete
  2. ಸಾರ್ ವಚನದ ಅರ್ಥ ಗಳ ವಿವರಣೆಗೆ ಧನ್ಯವಾದಗಳು ನಿಮ್ಮ ಕೆಲಸ ಮುಂದುವರೆಯಲಿ.

    ReplyDelete