ಸ್ವಾಮಿ ಸ್ವಾಮಿ ಭವಿಯ ಭಕ್ತನ ಮಾಳ್ಪುದು,
ಯೋಗ್ಯವೋ,ಅಯೋಗ್ಯವೋ?
ಆಗಮ ವಿಚಾರದಿಂದ ಆಗಬಹುದೆಂಬ ಸಿದ್ಧಾಂತ;
ಇಲ್ಲಿ ಪರಮಗುರು ಸಂಗನ ಬಸವಯ್ಯ ಸರ್ವಜಾತಿಯ
ಲಿಂಗದ ರಾಶಿ ಮಾಡಿದ ಸಿದ್ಧಾಂತ
ಕಪಿಲಸಿದ್ಧಮಲ್ಲಿಕಾರ್ಜುನ...
-ಸಿದ್ಧರಾಮೇಶ್ವರ.
ಈ ವಚನದಲ್ಲಿ ಸಿದ್ಧರಾಮಣ್ಣ ಭಕ್ತಿ ಚಳುವಳಿಯ ಒಂದು ಸಮಸ್ಯೆಯ ಬಗ್ಗೆ ವಿಚಾರ ಮಾಡುತ್ತಾರೆ.ಭವಿಯಾದವನು ಅಂದರೆ ಭಕ್ತಿ ಇಲ್ಲದವನನ್ನು ಭಕ್ತನನ್ನಾಗಿ ಮಾಡುವುದು ಸರಿಯೋ ತಪ್ಪೋ ಎಂದು ತಮ್ಮಲ್ಲೇ ಪ್ರಶ್ನೆ ಕೇಳಿಕೊಂಡು ಅದಕ್ಕೆ ಸಮರ್ಥನೆ ನೀಡಲು ಪ್ರಯತ್ನಿಸುತ್ತಾರೆ.ಆಗಮದ ಪ್ರಕಾರ ಹೊರಗಿನವರನ್ನು ಭಕ್ತಿ ಚಳುವಳಿಗೆ ಸೇರಿಸಿಕೊಳ್ಳಬಹುದು ಮತ್ತು ಅವರಿಗೆ ನಮ್ಮ ಸಮಾನ ಸ್ಥಾನ ಕೊಡಬಹುದು.ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಅಂದರೆ ಆಗಮದ ಯಾವ ಭಾಗದಲ್ಲಿ ಈ ರೀತಿಯ ಘೋಷಣೆ ಇದೆ ಎಂದು ತಿಳಿದು ಬರುವುದಿಲ್ಲ.ಅದೇನೇ ಆದರೂ ಇಲ್ಲಿ ಭಕ್ತಿ ಚಳುವಳಿಗೆ ಸೇರಲು ಅವನ ಜಾತಿ ಕುಲ ಯಾವುದು ಲೆಕ್ಕಕ್ಕೆ ಬರುವುದಿಲ್ಲ.ಇಲ್ಲಿ ಸಿದ್ಧರಾಮಣ್ಣ ಇನ್ನೊಂದು ವಾದವನ್ನು ಮಂಡಿಸುತ್ತ ಇಲ್ಲಿ ಬಸವಣ್ಣನ ತತ್ವ ವಿಚಾರ ಮತ್ತು ಕಲ್ಯಾಣದ ಜನರು ಆಚರಿಸುತ್ತಿದ್ದ ತತ್ವಗಳೇ ಮೇಲು ನಮಗೆ ಎಂದು ಹೇಳುತ್ತಾ ಬಸವಣ್ಣನ ಸಿದ್ಧಾಂತಗಳನ್ನು ಸಿದ್ಧರಾಮ ಒಪ್ಪಿಕೊಳ್ಳುತ್ತಾನೆ.ಅಂದರೆ ಇದು ಕೂಡ ಜಾತಿ ನಿರ್ಮೂಲನೆಗೆ ಅವರು ತೊಟ್ಟ ಪಣಕ್ಕೆ ಸಾಕ್ಷಿಯಾಗಿರುವ ಇನ್ನೊಂದು ವಚನ.ಇಲ್ಲಿ ಯಾರೊಬ್ಬನ ಹಿನ್ನೆಲೆ ಏನೇ ಇರಬಹುದು,ಅಥವಾ ಅವನು ಯಾವ ಜಾತಿಯವನೇ ಆಗಿರಬಹುದು,ಎಲ್ಲರಿಗೂ ಭಕ್ತಿ ಚಳವಳಿಯಲ್ಲಿ ಸ್ಥಾನವಿದೆ,ಎಲ್ಲರೂ ಸಮಾನರೆ ಎಂದು ಹೇಳುತ್ತಾರೆ.

No comments:
Post a Comment