ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ .
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ .
-ಬಸವಣ್ಣ,
ಈ ವಚನದಲ್ಲಿ
ಒಂದು ರೀತಿಯ ಪ್ರಾರ್ಥನೆ ಇದೆ ಮತ್ತು ಅದೇ ರೀತಿ ಒಂದೇ ದೇವರನ್ನು ಆರಾಧಿಸುವ ಪ್ರತಿಯೊಬ್ಬ ಭಕ್ತನನ್ನು ಒಂದೇ ಎಂದು ನಂಬುತ್ತೇವೆ ಎಂದು ಬಸವಣ್ಣನವರು ಪ್ರಮಾಣ ವಚನ ತೆಗೆದುಕೊಂಡ ಆಗಿದೆ.ಈ ವಚನದ ಪ್ರಕಾರ ಬಸವಣ್ಣ ಹೇಳುವಂತೆ ಶಿವನನ್ನು ಪೂಜಿಸುವ ಪ್ರತಿಯೋಬ್ಬನನ್ನು ಎಲ್ಲಾ ಸಂಪ್ರದಾಯದ ಸಂಕೋಲೆಯಿಂದ ಬಿಡಿಸಿ ಒಂದೇ ಎಂಬ ಭಾವನೆ ಇದೆ.೧೨ನೆ ಶತಮಾನದಲ್ಲಿ ಅಂಟಿಕೊಂಡಿದ್ದ ಜಾತಿ ಪದ್ಧತಿಯನ್ನು ಬಸವಣ್ಣನವರು ಹೋಗಲಾಡಿಸಲು ಪ್ರಯತ್ನ ಪಟ್ಟಿದ್ದರು ಎಂಬುದಕ್ಕೆ ಈ ವಚನವೂ ಸಾಕ್ಷಿ.ಇಲ್ಲಿ ಶಿವ ಭಕ್ತನಾದವನು ಬ್ರಾಹ್ಮಣನೆ ಹಾಗಿರಬಹುದು ಅಥವಾ
ಆತ ಅತಿ ಕೀಳು ಜಾತಿಯವನೇ ಆಗಿರಬಹುದು,ಒಂದೇ ದೇವರನ್ನು ಪೂಜಿಸುತ್ತಾರೆ ಅಂದರೆ ಇಬ್ಬರೂ ಸಮಾನರೆ ಎಂದು ಹೇಳುತ್ತಾ,ಅದೇ ರೀತಿ ಭವಿಯಾದವನು,ಅಂದರೆ ಭಕ್ತಿಯಿಲ್ಲದವನು,ಅವನು ಕೂಡ ಬ್ರಾಹ್ಮಣನೆ ಆಗಿರಬಹುದು ಅಥವಾ ಅಸ್ಪ್ರುಷ್ಯನೆ ಆಗಿರಬಹುದು,ಅವರು ಕೂಡ ಸಮಾನರೆ.ಇಲ್ಲಿ ಬಸವಣ್ಣನವರ ವಾದ ಏನೆಂದರೆ ಎಲ್ಲರೂ ಒಂದೇ ದೇವರನ್ನು ಪೂಜಿಸುವುದಾದರೆ ಎಲ್ಲರೂ ಸಮಾನರು,ಅದೇ ರೀತಿ
ಪೂಜಿಸದಿದ್ದರೆ ಕೂಡ ಅವರ ಮಧ್ಯೆ ಕೂಡ ಜಾತಿ ಆಧಾರದ ಮೇಲೆ ವಿಂಗಡಣೆ ಮಾಡುವುದು ಸರಿಯಲ್ಲ ಎಂದು ಹೇಳುತ್ತಾರೆ.ಈ ತರ್ಕವನ್ನು ನನ್ನ ಮನಸ್ಸು ಒಪ್ಪುತ್ತದೆ,ಯಾವುದೇ ಜಾತಿ ವಿಂಗಡಣೆ
ಮಾಡದೆ ಎಲ್ಲರೂ ಒಂದೇ ಸಮ ಎಂದು ಸ್ವೀಕರಿಸುತ್ತೇನೆ,ಇದರಲ್ಲಿ ಎಳ್ಳಷ್ಟು ನಂಬಿಕೆ ಇಲ್ಲದಿದ್ದರೆ ತನ್ನ ಮೂಗನ್ನು ಕೊಯ್ಯಿ ಎಂದು
ಕೂಡಲಸಂಗಮನಲ್ಲಿ ಪ್ರಾರ್ಥಿಸುತ್ತಾರೆ.
ಈ ವಚನದ ಒಟ್ಟಾರೆ ಅರ್ಥ ಭಕ್ತಿಯ ಮಾರ್ಗದ ಮೇಲೆ ಜನರನ್ನು ಗುರುಉತಿಸಬೇಕೆ ಹೊರಟು ಅವರನ್ನು ಜಾತಿಯ ಆಧಾರದ ಮೇಲೆ ಬೇರ್ಪಡಿಸುವುದು ಸರಿಯಲ್ಲ ಎಂಬುದು.
No comments:
Post a Comment