Monday, 2 April 2012

ವಚನ ಸಿಂಚನ ೩೧:ಮರ್ಕಟ ಮನಸು

ಕೊಂಬೆಯ ಮೇಲಿನ ಮರ್ಕಟನಂತೆ ಲಂಘಿಸೂದೆನ್ನ ಮನವು,
ನಿಂದಲ್ಲಿ ನಿಲಲೀಯದೆನ್ನ ಮನವು,
ಹೊಂದಿದಲ್ಲಿ ಹೊಂದಲೀಯದೆನ್ನ ಮನವು,
ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು
ನಿಮ್ಮ ಧರ್ಮ..
                                    -ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ಗುರಿ ಇಲ್ಲದ ಮನುಷ್ಯನ ಚಂಚಲ ಮನಸ್ಸಿನ ಬಗ್ಗೆ ಹೇಳುತ್ತಾರೆ.ಮಂಗವೊಂದು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಹಾಗೆ ತನ್ನ ಮನಸ್ಸು ಕೂಡ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಜಾರುತ್ತಿದೆ.ಆಸೆಗಳು ಕೂಡ ಒಂದರ ನಂತರ ಇನ್ನೊಂದು ಅನ್ನುವ ಹಾಗೆ ಸುಳಿಯುತ್ತಿವೆ.ಯಾವುದಾದರು ಒಂದೇ ವಿಷಯಕ್ಕೆ ಅಥವಾ ಒಂದೇ ಗುರಿಯೆಡೆಗೆ ಮನಸ್ಸನ್ನು ಕ್ರೂಡಿಕರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,ಒಂದೇ ಕಡೆ ಮನವು ನಿಲ್ಲುತ್ತಿಲ್ಲ, ಆದ್ದರಿಂದ ನನ್ನನ್ನು ಭಕ್ತಿ ಆಧ್ಯಾತ್ಮದಿಂದ ತುಂಬಿರುವ ನಿಮ್ಮ ಚರಣ ಕಮಲದ ಸುತ್ತ ಸುತ್ತುವಂತೆ ನನ್ನನ್ನು ದುಂಬಿಯನ್ನಾಗಿ ಮಾಡು ಎಂದು ಬೇಡುತ್ತಾ ನಿಮ್ಮ ಧರ್ಮವನ್ನು ಎಲ್ಲೆಲ್ಲೂ ಪಸರಿಸುತ್ತೇನೆ ಎಂದು ಹೇಳುತ್ತಾರೆ.

ಪ್ರಪಂಚದ ಬೇರೆ ವಿಷಯಗಳಿಗೆ ಬೇಸತ್ತು ಹೋಗಿರುವ ಮನಸ್ಸು ಕೇವಲ ಭಕ್ತಿಯೆಡೆಗೆ ಸಾಗುವಂತೆ ತೋರಿಸುತ್ತದೆ ಈ ವಚನ.

"ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ" ಎಂದು ಇನ್ನೊಂದು ವಚನದಲ್ಲಿ ಹೇಳುವಂತೆ ಇಲ್ಲಿ ಕೂಡ ಮನೋನಿಗ್ರಹದ ಬಗ್ಗೆ ಹೇಳುತ್ತಾರೆ.

4 comments:

  1. ವಾಹ್.. ಎಂತಾ ಅರ್ಥವಿದೆ ಈ ವಚನದಲ್ಲಿ... ಥಾಂಕ್ಸ್ ಗಿರೀಶ್...

    ReplyDelete
  2. ಚೆನ್ನಾಗಿದೆ ಗಿರೀಶ್ ಜೀ :)

    ReplyDelete
  3. ಧನ್ಯವಾದ ಧನ್ಯವಾದ ಇಬ್ಬರಿಗೂ... ಹೀಗೆ ಓದುತ್ತಿರಿ..ತಪ್ಪಿದ್ದರೆ ತಿದ್ದುತ್ತಿರಿ..

    ReplyDelete
  4. ವಿವರಣೆ ಚೆನ್ನಾಗಿದೆ

    ReplyDelete