Sunday 28 October 2012

ವಚನ ಸಿಂಚನ ೫೫:ದೇಹವೆಂಬ ಬಂಡಿ

ಕಾಲುಗಳೆರಡು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವವರ್ಯೆವರು ಮಾನಿಸರು
ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ
ಅದರಿಚ್ಚೆಯನರಿದು ಹೊಡೆಯದಿರ್ದಡೆ
ಅದರಚ್ಚು ಮುರಿದಿತ್ತು ಗುಹೇಶ್ವರಾ...
                            -ಅಲ್ಲಮಪ್ರಭು

ಈ ವಚನದಲ್ಲಿ ಅಲ್ಲಮಪ್ರಭು ಮನುಷ್ಯನ ದೇಹ ಆತ್ಮ ಮತ್ತು ಮನಸ್ಸಿನ ಸಂಬಂಧಗಳು ಎಷ್ಟು ಚಂಚಲ ಮತ್ತು ಹೊಂದಾಣಿಕೆ ಇಲ್ಲದಂತಾಗಿದೆ ಎಂದು ವಿವರಿಸುತ್ತಾರೆ.ಎನ್ನ ಕಾಲೇ ಕಂಬ ಎಂದು ಬಸವಣ್ಣ ದೇಹವನ್ನು ದೇವಾಲಯಕ್ಕೆ ಹೋಲಿಸಿದ ಹಾಗೆ ಇಲ್ಲಿ ಅಲ್ಲಮಪ್ರಭು ದೇಹವನ್ನು ಬಂಡಿಗೆ ಹೋಲಿಸುತ್ತಾ ಕಾಲುಗಳನ್ನು ಬಂಡಿಯ ಗಾಲಿ ಎಂದು ಹೇಳುತ್ತಾನೆ.

ಈ ದೇಹವೆಂಬ ಬಂಡಿಗೆ ಆತ್ಮ ಯಜಮಾನನಾದರೆ ಅದನ್ನು ಹೊಡೆಯುವವರು ಐದು ಜನ ಮಾನಿಸರು,ಅಂದರೆ ಪಂಚೇಂದ್ರಿಯಗಳು..ಈ ಐದು ಇಂದ್ರಿಯಗಳಲ್ಲಿ ಒಂದಕ್ಕೆ ಒಂದು ಹೊಂದಾಣಿಕೆ ಇಲ್ಲ,ಎಲ್ಲವು ತಮ್ಮ ತಮ್ಮ ಪಥದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತವೆ,ತಮ್ಮ ಇಷ್ಟದ ಸುಖಗಳನ್ನು ಅನುಭವಿಸಲು ಪ್ರಯತ್ನಿಸುತ್ತವೆ. 'ಅದರಿಚ್ಚೆಯನರಿದು ಹೊಡೆಯದಿರ್ದಡೆ' ಅಂದರೆ ಆತ್ಮದ ಇಚ್ಛೆಯನ್ನು ಅರಿಯದೆ ಈ ಇಂದ್ರಿಯಗಳು ಮುನ್ನಡೆಯುತ್ತಿವೆ,ಆಗ 'ಅದರಚ್ಚು ಮುರಿದಿತ್ತು' ಅಂದರೆ ಬಂಡಿಯ ಆಧಾರವಾದ ಆಚ್ಚು ಕಳಚಿ ಬೀಳುತ್ತದೆ ಎಂದು ವಿವರಿಸುತ್ತಾನೆ.ಆಧಾರವೇ ಇಲ್ಲದಿದ್ದರೆ ಬಂಡಿಯು ಕೂಡ ಬಿದ್ದ ಹಾಗೆ.

ಅಂದರೆ ಇಲ್ಲಿ ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ,ಜೀವನವೆಂಬ ಪಯಣದಲ್ಲಿ ಬಂಡಿಯೆಂಬ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಬಹುದು.

5 comments:

  1. ಆಹಾ, ಸುಂದರ ವಚನ ಗಿರೀಶ್ ಜೀ.

    ReplyDelete
    Replies
    1. ಕಿರಣರೆ,ಶೂನ್ಯ ಸಂಪಾದನೆಯನ್ನು ಪ್ರತಿಪಾದಿಸಿದ ಅಲ್ಲಮನ ವಚನಗಳ ತೂಕ ಇದು.... ಬೇರೆ ಎಲ್ಲ ವಚನಕಾರರಿಗಿಂತಲೂ ಸ್ವಲ್ಪ ಭಿನ್ನವಾದ ವಚನಗಳನ್ನು ಅಲ್ಲಮಪ್ರಭು ರಚಿಸಿದ್ದಾರೆ...

      Delete
  2. ನಿಜ, ತುಸು ಭಿನ್ನವಾಗಿ ಯೋಚಿಸುವ ಅಲ್ಲಮಪ್ರಭುವಿನ ವಚನಗಳು ಆಳವಾದ ಸಾಹಿತ್ಯ ಸರಸ್ಸಾಗರ.

    ReplyDelete
    Replies
    1. ಖಂಡಿತ ನಿಮ್ಮ ಮಾತು ಸತ್ಯ ಸರ್

      Delete
    2. ದೇಹವೆಂಬ ಬ೦ಡಿಯಲ್ಲಿ ಪಂಚೇಂದ್ರಿಯಗಳೆಂಬ ಅವಗುಣಗಳನ್ನು ಅಳಿದು ಲಿಂಗಾಂಗ ಸಾಮರಸ್ಯ ಹೊಂದಬಹುದು. ಎಂಬ ವಚನದ ಭಾವ

      Delete