Monday 1 October 2012

ವಚನ ಸಿಂಚನ ೫೨:ಕಾಯಕ ಮತ್ತು ದೈವ

ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ,
ಮಾಡಿ ಭೋ ಮಾಡಿ ಭೋ
ಎನಗೆ ಲೆಸಾಯಿತ್ತು,ಹೋಯಿತ್ತೆಂಬ ಚಿಂತೆ ಬೇಡ
ಇದಿತ್ತೆಂಬ ಸಂತೋಷ ಬೇಡ
ಸಕಳೇಶ್ವರ ದೇವನವರನಂದು ಸಲಹುವನಾಗಿ.
                         -ಸಕಲೇಶ ಮಾದರಸ

ಈ ವಚನದಲ್ಲಿ ಸಕಲೇಶ ಮಾದರಸ ಕಾಯಕದಲ್ಲಿರಬೇಕಾದ ಸಹಜ ಗಣಗಳನ್ನು ವಿವರಿಸುತ್ತಾ ಅದು ಅಧ್ಯಾತ್ಮ ಸಾಧನೆ ಕೂಡ ಎಂದು ಹೇಳುತ್ತಾನೆ.ಸದಾ ಒಳ್ಳೆಯ ಕೆಲಸವನ್ನು ಮಾಡುವ ಭಕ್ತನಿಗೂ,ಅಂತ ಭಕ್ತನಿಗೆ ಸಕಲವನ್ನೂ ನೀಡುವ ದೇವರಿಗೂ ಎಂದಿಗೂ ಕೇಡು ಎಂಬುದಿಲ್ಲ.ತನಗೆ ಲೆಸಾಯಿತ್ತು,ತನಗೆ ಸಿಗಲಿಲ್ಲ ಎಂಬ ಚಿಂತೆ ಬೇಡ,ಎಂದು ಹೇಳುತ್ತಾ ಹೆಚ್ಚು ಇದೆ ಎಂಬ ಸಂತೋಷ ಪಡದೆ ತನ್ನ ಕಾಯಕವನ್ನು ಮಾಡಬೇಕು.ಆ ಕಾಯಕದಲ್ಲಿ ದೇವರನ್ನು ಅರಿಯಬೇಕು,ಆಗ ಶಿವನು ತಮ್ಮನ್ನು ಸಲಹುವವನು ಎಂದು ಹೇಳುತ್ತಾನೆ ವಚನಕಾರ.

(ಸಕಳೇಶ ಮಾದರಸ-೧೧೩೦. ಬಸವಣ್ಣನ ಹಿರಿಯ ಸಮಕಾಲೀನ. ಕಲ್ಲುಕುರಿಕೆ ಎಂಬ ಊರಿನ ಅರಸ. ತಂದೆಯ ಹೆಸರು ಮಲ್ಲಿಕಾರ್ಜುನ. ನಂತರದ ಕಾಲದಲ್ಲಿ ಬಂದ ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕ ಎಂಬ ಕವಿಗಳು ಇವನ ವಂಶದವರು. ಮಾದರಸನ ೧೩೩ ವಚನಗಳು ದೊರೆತಿವೆ)

3 comments:

  1. ಸಕಲೇಶರ ಮಾದರಸರ ಪರಿಚಯ ಮತ್ತು ವಚನದ ವ್ಯಕ್ತತೆ ಮನ ಮುಟ್ಟಿತು.

    ಎಲ್ಲ ಕಾಲಕ್ಕೂ ಒಪ್ಪುವ ಶರಣರು ನಮ್ಮ ವಚನಕಾರರು.

    ReplyDelete
  2. ಈ ವಚನ ಓದಿರಲಿಲ್ಲ...ಚೆನ್ನಾಗಿದೆ ಭಾವಾರ್ಥ

    ReplyDelete
  3. ಸಕಲೇಶ್ ಮಾದರಸರು ತಮ್ಮ ವಚನದ ಮೂಲಕ ಕಾಯಕ ಮತ್ತು ಭಕ್ತಿಯ ಬಗ್ಗೆ ಚೆನ್ನಾಗಿ ಉಲ್ಲೇಖಿಸಿದ್ದಾರೆ.

    ReplyDelete