ಎಂಥವನಾದಡೇನು.ಲಿಂಗ ಮುಟ್ಟದವನೇ ಕೀಳು ಜಾತಿ.
ಕುಲವಹುದು ತಪ್ಪದು ಲಿಂಗಮುಟ್ಟಲೊಡನೆ..
ಹೊನ್ನಹುದು ತಪ್ಪದು ಪರುಷ ಮುಟ್ಟಲೊಡನೆ.
ಕೂಡಲಸಂಗಮದೇವನೋಲ್ಲ ಸರ್ವಸಂದೇಹಿಗಳ...
-ಬಸವಣ್ಣ
ಈ ವಚನದಲ್ಲಿ ಬಸವಣ್ಣ ಲಿಂಗದ ಗುಣ ಲಕ್ಷಣಗಳನ್ನು ವಿವರಿಸುತ್ತಾರೆ.ಹೇಗೆ ಲಿಂಗದ ಒಂದು ಸ್ಪರ್ಶದಿಂದ ಜನರ ಬದಲಾವಣೆ ಆಗುತ್ತದೆ ಎಂಬುದನ್ನು ಇಲ್ಲಿ ಹೇಳುತ್ತಾರೆ.ಇಷ್ಟ ಲಿಂಗ ಧರಿಸದೆ ಇದ್ದರೆ ಅವನನ್ನು ಮೇಲು,ಕೀಳು ಎಂದು ವಿಂಗಡಿಸಲು ಸಾಧ್ಯವಿಲ್ಲ.ಲಿಂಗ ಧರಿಸದೆ ಇರುವವರೆ ಕೀಳು ಮತ್ತು ಲಿಂಗ ಧರಿಸಿದವರೆಲ್ಲರೂ ಉನ್ನತರಾಗುತ್ತಾರೆ.ಅವರೆಲ್ಲರನ್ನು ಒಂದೇ ಸಮಾನೆರೆಂದು ಸ್ವೀಕರಿಸಬೇಕು ಎಂದು ಹೇಳುತ್ತಾ ಮತ್ತೆ ಜಾತಿ ವ್ಯವಸ್ಥೆಯನ್ನು ನಿರ್ಮೂಲ ಮಾಡುವ ಕಾರ್ಯಕ್ಕೆ ಲಿಂಗವನ್ನು ಉಪಯೋಗಿಸುತ್ತಾರೆ ಬಸವ.ಇಷ್ಟ ಲಿಂಗ ಧರಿಸಿದವರು ಶಿವನ ಭಕ್ತರು,ಒಂದೇ ದೇವರನ್ನು ಪೂಜಿಸುವ ಎಲ್ಲರೂ ಸಮಾನರಾಗುತ್ತಾರೆ,ಅವರು ಹಿಂದೆ ಯಾವ ಕುಲದಲ್ಲೇ ಇದ್ದರೂ ಸರಿ.ಇಲ್ಲಿ ಲಿಂಗ ಧರಿಸುವ ಕ್ರಿಯೆಯನ್ನು ಒಂದು ಭೌತಿಕ ಕ್ರಿಯೆಗೆ ಹೋಲಿಸುತ್ತಾರೆ.ಪುರಾಣದ ಪ್ರಕಾರ ಪರುಶವನ್ನು ಮುಟ್ಟಿದ ಕೂಡಲೇ ಅದು ಚಿನ್ನವಾದಂತೆ,ಲಿಂಗ ಧಾರಣೆ ಕೂಡ ಅದು ಎಲ್ಲಾ ಕೀಳು ಜಾತಿಯವರನ್ನು ಕೂಡ ಉನ್ನತ ಜಾತಿಯವರನ್ನಾಗಿ ಪರಿವರ್ತಿಸುತ್ತದೆ.ಇದರಿಂದ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುತ್ತದೆ ಎಂದು ಬಸವಣ್ಣ ಹೇಳುತ್ತಾರೆ.ಇಲ್ಲಿ ಬಸವನ ಪ್ರಕಾರ ಎಲ್ಲರೂ ಲಿಂಗ ಧರಿಸುವುದರಿಂದ ಎಲ್ಲರಲ್ಲೂ ಸಮಾನತೆ ಎದ್ದು ಕಾಣುತ್ತದೆ.
ವಚನದ ಕೊನೆಯ ಸಾಲಿನಲ್ಲಿ ಇಷ್ಟಲಿಂಗದ ಮಹಿಮೆ ಮತ್ತು ಅದರ ಪ್ರಾಮುಖ್ಯತೆಯನ್ನು ಸಂದೇಹ ಪಡುವವರನ್ನು ದೇವರು ಮೆಚ್ಚುವುದಿಲ್ಲ ಅಂದರೆ ಪರಮಾತ್ಮ ಕೂಡ ಎಲ್ಲ ಭಕ್ತರನ್ನು ಸಮಾನಾಗಿ ಕಾಣುತ್ತಾನೆ ಎಂದು.
No comments:
Post a Comment